ಮಂಗಳವಾರ, ಮೇ 8, 2012

ಉತ್ತಮ ಸಾಹಿತ್ಯಾಸಕ್ತರನ್ನೇ ಆಯ್ಕೆ ಮಾಡಬೇಕು

 ಕನ್ನಡ ಸಾಹಿತ್ಯ ಪರಿಷತ್ತಿನ ಚಿಹ್ನೆ

  ಬಸವಕಲ್ಯಾಣ, ಮೇ. 6


ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರನ್ನಾಗಿ ಸೂಕ್ತ ವ್ಯಕ್ತಿಯನ್ನು ನೇಮಿಸಿ ಸಾಹಿತ್ಯಿಕ ವಾತಾವರಣ ಹುಟ್ಟು ಹಾಕಬೇಕು. ಸ್ಥಳೀಯ ಕಸಾಪ ಸದಸ್ಯರ ಗಮನಕ್ಕೆ ತರದೇ ಈ ಸಂಬಂಧ ಯಾವುದೇ ನಿಣ೯ಯಗಳನ್ನು ಕೈಗೊಳ್ಳಬಾರದು ಎಂದು ತಾಲೂಕಿನ ಕಸಾಪ ಸದಸ್ಯರು ಆಗ್ರಹಿಸಿದ್ದಾರೆ.

ಈ ಕುರಿತು 25 ಕ್ಕೂ ಹೆಚ್ಚು ಸದಸ್ಯರ ಸಹಿ ಇರುವ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, 12 ನೇ ಶತಮಾನದ ಕಲ್ಯಾಣ ಸಾಮಾಜಿಕ ಕ್ರಾಂತಿ ನಡೆಸಿದ ವಿಶ್ವಗುರು ಬಸವಣ್ಣನವರ ಕಾಯ೯ ಕ್ಷೇತ್ರವಾಗಿದೆ. ಇಂತಹ ಪುಣ್ಯ ಕ್ಷೇತ್ರವಾದ ಬಸವಕಲ್ಯಾಣ ಕಸಾಪ ಅಧ್ಯಕ್ಷರನ್ನಾಗಲಿ, ಪದಾದಿಕಾರಿಗಳನ್ನಾಗಲಿ ಉತ್ತಮ ಸಾಹಿತ್ಯಾಸಕ್ತರನ್ನೇ ಆಯ್ಕೆ ಮಾಡಬೇಕು ಎಂದಿದ್ದಾರೆ.

ಕಲ್ಯಾಣವೆಂಬ ಪವಿತ್ರ ನಾಡಿನಿಂದ ಅನೇಕ ಶರಣರು ವಚನಗಳು ರಚಿಸಿ ಜನಜಾಗೖತಿ ಕಾಯ೯ವನ್ನು ಮಾಡಿದ್ದಾರೆ. ನಂತರದಲ್ಲಿ ಕೆಲಕಾಲ ಸಾಹಿತ್ಯಿಕ ಚಟುವಟಿಕೆ ನಿಂತು ಹೋಗಿದ್ದರೂ ಸಹ ಇಚೆಗೆ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಪ್ರತಿಭಾವಂತ ಜನರು ಬೆಳಕಿಗೆ ಬರುತಿದ್ದಾರೆ ಎಂದು ತಿಳಿಸಿದ್ದಾರೆ.

ಕಾವ್ಯ, ಕಥೆ, ಲೇಖನ, ಅಂಕಣ ಬರಹ, ಕಾದಂಬರಿ, ಪ್ರಬಂಧ ಮುಂತಾದ ಪ್ರಕಾರಗಳಲ್ಲಿ ಕೆಲವರು ಮಹತ್ತರ ಸಾಧನೆಯನ್ನು ಮಾಡಿ ಗಮನ ಸೆಳೆಯುತಿದ್ದಾರೆ. ಹಲವರ ಪುಸ್ತಕಗಳು ಅಧಿಕ ಸಂಖ್ಯೆಯಲ್ಲಿ ಪ್ರಕಟಗೊಂಡಿವೆ. ಆದರೂ ಪರಿಷತ್ತಿನಿಂದ ಇವರನ್ನೆಲ್ಲಾ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕೆಲವರು ಹಣಬಲ ಮತ್ತು ಶಿಫಾರಸ್ಸಿನೊಂದಿಗೆ ಪ್ರತಿಸಲ ಸ್ಥಾನಗಳನ್ನು ಪಡೆದುಕೊಳ್ಳುತಿದ್ದಾರೆ. ಈ ಸಲವೂ ಅದೇ ರೀತಿಯಾದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚಿರಿಸಿದ ಅವರು, ಪದೇ ಪದೇ ಕಸಾಪ ಪದಾಧಿಕಾರಿ ಆಗುವವರನ್ನು ಬದಿಗಿಟ್ಟು ಸಂಪೂಣ೯ವಾಗಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಸಾಹಿತಿಗಳಲ್ಲದವರು ಸಾಹಿತಿಗಳೆಂಬಂತೆ ನೈಜ ಪ್ರತಿಭಾವಂತ ಸಾಹಿತಿಗಳನ್ನು ಕಡೆಗಣಿಸುತ್ತಾ ಬರುತ್ತಿರುವುದು ಹೆಚ್ಚಾಗಿದೆ. ಸಾಹಿತ್ಯದ ಗಂಧ ಗಾಳಿಯೂ ಗೊತ್ತಿಲ್ಲದ ಕೆಲವರು ಇದ್ದಕಿದ್ದಂತೆ ದಿಢೀರ ಸಾಹಿತಿಗಳಾಗಿ ಹುಟ್ಟಿಕೊಳ್ಳುವ ಆತಂಕಗಳು ಹೆಚ್ಚುತ್ತಿವೆ. ಒಂದು ಸಾಲು ಸಹ ಬರೆಯದವರು ನಾನು ಪುಸ್ತಕ ಬರೆದಿದ್ದೇನೆ ಎನ್ನುವಂಥ ವಾತಾವರಣ ಸೖಷ್ಟಿಸುತಿದ್ದಾರೆ.

ಪುಟಗಟ್ಟಲೆ ಸುಳ್ಳಿನಿಂದಲೇ ಕೂಡಿದ ಪರಿಚಯ ಪತ್ರ ಸಿದ್ಧಪಡಿಸುವ ಕೆಲವರು ಯಾವುದೇ ದಾಖಲೆಗಳಿಲ್ಲದೇ ಸಮ್ಮೇಳನಾಧ್ಯಕ್ಷರಾಗುವ ಪಟ್ಟಿಯಲ್ಲಿ ಸೇರಿಕೊಂಡು ಪೈಪೋಟಿಗೆ ನಿಲ್ಲುವಂತಾಗಿದೆ. ಒಟ್ಟಿನಲ್ಲಿ ಸಾವ೯ಜನಿಕರ ಕಣ್ಣಲ್ಲಿ ಮಣ್ಣೆರಚುವ ಕಾಯ೯ ನಡೆಯುತ್ತಿದೆ ಎಂದು ಕಸಾಪ ಸದಸ್ಯರಾದ ರುದ್ರಮಣಿ ಮಠಪತಿ, ರುದ್ರೇಶ್ವರ ಸ್ವಾಮಿ , ನಾಗೇಂದ್ರ ಬಿರಾದಾರ್್, ಭೀಮಾಶಂಕರ ಬಿರಾದಾರ್್, ಚನ್ನವೀರ ಜಮಾದಾರ್್ ಸೇರಿದಂತೆ ಮುಂತಾದವರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಆಗಿರುವ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅವರು ಯಾವುದೇ ಭೇದಭಾವ ಮಾಡದೇ ಸೂಕ್ತ ವ್ಯಕ್ತಿಗಳಿಗೆ ತಾಲೂಕಾ ಕಸಾಪ ಅಧ್ಯಕ್ಷರನ್ನಾಗಿ ಹಾಗೂ ಇತರೆ ಪದಾಧಿಕಾರಿಗಳನ್ನಾಗಿ ನ್ಯಾಯಯುತವಾಗಿ ನೇಮಕ ಮಾಡಬೇಕು ಎಂದು ಮನವಿಸಿದ್ದಾರೆ.

ಯಾವುದೇ ಜಾತಿ, ಜನಾಂಗ, ಧಮ೯ದವರನ್ನು ಪ್ರಾತಿನಿಧ್ಯ ಸಿಗುವಂತೆ ಆಯ್ಕೆ ಮಾಡುವುದು ಸೇರಿದಂತೆ ತಾಲೂಕಾ ಅಥವಾ ಇತರೆ ಸಮ್ಮೇಳನಗಳಲ್ಲಿ ಸಮ್ಮೇಳನಾಧ್ಯಕ್ಷರ ನೇಮಕಾತಿಯಲ್ಲಿ ಪಾರದಶ೯ಕತೆ ಹೊಂದಿರಬೇಕು. ಸಾಹಿತಿಗಳಲ್ಲದವರನ್ನು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ನೇಮಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ತಾಲೂಕಾ ಮತ್ತು ಜಿಲ್ಲಾ ಮಟ್ಟದ ಕಾಯ೯ಕ್ರಮಗಳಲ್ಲಿ ಕೆಲ ವಷ೯ಗಳಿಂದ ಸತ್ಕಾರ ಮಾಡಿಕೊಂಡವರನ್ನೇ ಪದೇ ಪದೇ ಸನ್ಮಾನಿಸಲಾಗುತ್ತಿದೆ. ಪ್ರತಿ ಕಾಯ೯ಕ್ರಮಗಳಲ್ಲಿ ಹೊಸಬರನ್ನು ಅವಕಾಶ ಮಾಡಿಕೊಟ್ಟು ಅವರಲ್ಲಿ ಹುಮ್ಮಸ್ಸು ಬರುವಂತೆ ಪ್ರೊತ್ಸಾಹಿಸಬೇಕು. ಇದುವರೆಗೆ ನಾವೆಲ್ಲ ಸುಮ್ಮನೆ ಕುಳಿತಿದ್ದೇವು ಆದರೆ ಇನ್ನೂ ಮುಂದೆ ಅನ್ಯಾಯಕ್ಕಾಗಿ ಹೋರಾಡಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಈ ಎಲ್ಲಾ ವಿಷಯಗಳನ್ನು ಕಸಾಪ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅವರ ಗಮನಕ್ಕೆ ತರಲು ಬಯಸುತಿದ್ದೇವೆ ಎಂದು ಕಸಾಪ ಸದಸ್ಯರಾದ ಶಿವಕುಮಾರ ವಕಾರೆ, ಶಾಂತಲಿಂಗ ಮಠಪತಿ, ಡಾ. ಬಸವರಾಜ ಸ್ವಾಮಿ, ಬಕ್ಕಯ್ಯ ಸ್ವಾಮಿ, ಉಮಾಕಾಂತ ದದಾಪೂರೆ, ಪಿ.ಜಿ.ಹಿರೇಮಠ, ಅಣ್ಣಾರೆಡ್ಡಿ ಬೋಗಲೆ, ಶಿವರಾಜ ಬಾಲಕಿಲೆ, ಮಹಾದಪ್ಪ ಖಂಡಾಳೆ,  ದೇವಿಂದ್ರ ಬರಗಾಲೆ, ಶಿವಾನಂದ ಶೀಲವಂತ ಸೇರಿದಂತೆ ಮುಂತಾದವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಕಾಮೆಂಟ್‌ಗಳಿಲ್ಲ: